ಟೆಕ್ ಲೋಕದಲ್ಲಿ ಕ್ರಾಂತಿಕಾರಿ ಪ್ರಯೋಗಗಳನ್ನು ಮಾಡಿರುವ ಎಲಾನ್ ಮಸ್ಕ್ ಅವರ ಉಪಗ್ರಹದ ಮೂಲಕ ಇಂಟರ್ನೆಟ್ ಸೌಲಭ್ಯ ಕಲ್ಪಿಸುವ ‘ಸ್ಟಾರ್ಲಿಂಕ್ ಯೋಜನೆ’ ಭಾರತದಲ್ಲಿ ಕಾರ್ಯರೂಪಕ್ಕೆ ಬರುವ ಮೊದಲೇ, ಸ್ವದೇಶಿ ಕಂಪನಿ ಏರ್ಟೆಲ್ ಆ ಸಾಧನೆ ಮಾಡಲು ಸಜ್ಜಾಗಿದೆ ಎಂದು ವರದಿಗಳು ಹೇಳಿವೆ.
ಉತ್ತರ ಪ್ರದೇಶದ ಪ್ರಯಾಗರಾಜದಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ 10 ದಿನದಲ್ಲಿ 10 ಕೋಟಿಗೂ ಅಧಿಕ ಜನರು ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಕ್ತಿ (ಎನರ್ಜಿ) ಉತ್ಪಾದನೆಗಾಗಿ ಚೀನಾ ಕೈಗೊಂಡಿರುವ ಪರಮಾಣು ಸಮ್ಮಿಳನ ಪ್ರಯೋಗದ ಭಾಗವಾಗಿ ಸೃಷ್ಟಿಸಲಾಗಿರುವ ‘ಕೃತಕ ಸೂರ್ಯ’ನ ಮೇಲಿನ ಶಾಖವು ಸತತ 1 ಸಾವಿರ ಸೆಕೆಂಡುಗಳ ಕಾಲ (17 ನಿಮಿಷ) 100 ದಶಲಕ್ಷ ಡಿಗ್ರಿ ತಾಪಮಾನದ ಸ್ಥಿರತೆ ಕಾಯ್ದುಕೊಂಡಿದೆ.
ಜಲಗಾಂವ್ ಬಳಿ ತಾವಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿ ಹರಡಿದ ಕಾರಣ, ಆ ರೈಲಿನಿಂದ ಜಿಗಿದು ಕೆಳಗೆ ನಿಂತಿದ್ದ ಪ್ರಯಾಣಿಕರ ಮೇಲೆ ಪಕ್ಕದ ಹಳಿ ಮೇಲೆ ಬಂದ ಕರ್ನಾಟಕ ಎಕ್ಸ್ಪ್ರೆಸ್ ರೈಲು ಹರಿದಿದೆ. ಆಗ 12 ಜನರು ದಾರುಣ ರೀತಿಯಲ್ಲಿ ಮೃತಪಟ್ಟು 50ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.
‘ನಟ ಸೈಫ್ ಅಲಿಖಾನ್ ಇರಿತ ಪ್ರಕರಣದಲ್ಲಿ ಬಂಧಿತ ಆರೋಪಿ ಬಾಂಗ್ಲಾದೇಶಿ ಆಗಿರುವ ಮಾತ್ರಕ್ಕೆ, ಆ ದಾಳಿಗೆ ಇಡೀ ರಾಷ್ಟ್ರವನ್ನು ದೂಷಿಸಲಾಗದು’ ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಫಾರೂಖ್ ಅಬ್ದುಲ್ಲಾ ಪ್ರತಿಪಾದಿಸಿದ್ದಾರೆ.