ಭಾರತದ ಪ್ರಧಾನಿ ನರೇಂದ್ರ ಮೋದಿ ಕಾಲಿಡುತ್ತಿದ್ದಂತೆ ಮಾರಿಷಸ್ನಲ್ಲಿ ಮಳೆ:ಆರೋಗ್ಯ ಸಚಿವ ಸಂತಸ 10 ವರ್ಷಗಳ ಬಳಿಕ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಾರಿಷಸ್ಗೆ ನೀಡಿದ ಭೇಟಿಯ ಬಗ್ಗೆ ಮಾತನಾಡಿದ ಅಲ್ಲಿ ಆರೋಗ್ಯ ಸಚಿವ ಅನಿಲ್ ಕುಮಾರ್ ಬಚ್ಚೂ, ‘ಮೋದಿ ಅವರು ಮಾರಿಷಸ್ ನೆಲಕ್ಕೆ ಕಾಲಿಡುತ್ತಿದ್ದಂತೆ ಮಳೆ ಶುರುವಾಯಿತು. ಬಹಳ ದಿನಗಳಿಂದ ಬರದ ಮಳೆ ಏಕಾಏಕಿ ಸುರಿಯತೊಡಗಿತು’ ಎಂದಿದ್ದಾರೆ.