ಅಮೆರಿಕ ಮೂಲದ ಕ್ವಾಂಟಂ ಸ್ಕೇಪ್ ಕಂಪನಿಯ ಮಾಜಿ ಸಿಇಒ ಜಗದೀಪ್ ಸಿಂಗ್ ದಿನದ ವೇತನ ₹48 ಕೋಟಿ!ಜಾಗತಿಕ ಕಂಪನಿಗಳಲ್ಲಿ ಭಾರತೀಯ ಮೂಲದ ಸಿಇಒಗಳ ಪ್ರಭಾವ ಹೆಚ್ಚುತ್ತಿರುವ ಹೊತ್ತಿನಲ್ಲೇ, ಅಮೆರಿಕ ಮೂಲದ ಕ್ವಾಂಟಂ ಸ್ಕೇಪ್ ಕಂಪನಿಯ ಮಾಜಿ ಸಿಇಒ ಜಗದೀಪ್ ಸಿಂಗ್ ವಾರ್ಷಿಕ 17500 ಕೋಟಿ ರು. ವೇತನ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಅಂದರೆ ಅವರ ಒಂದು ದಿನದ ವೇತನ ಭರ್ಜರಿ 48 ಕೋಟಿ ರುಪಾಯಿಗಳು.