ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿಗೆ 2024-25ರ ಬಜೆಟ್ನಲ್ಲಿ 1,309.46 ಕೋಟಿ ರು. ಮೀಸಲಿಡಲಾಗಿದೆ. ಇದು 2021-22ನೇ ಸಾಲಿನ 3,768 ಕೋಟಿ ರು.ಗಿಂತ ಕಡಿಮೆಯಿದ್ದು, ಈ ಬಾರಿಯೂ ಜನಗಣತಿ ನಡೆಯುವುದರ ಬಗ್ಗೆ ಸಂಶಯ ಹುಟ್ಟುಹಾಕಿದೆ.
ಮುಂದಿನ 5 ವರ್ಷ ಅವಧಿಗೆ ಭಾರತಕ್ಕೆ ದಿಕ್ಸೂಚಿ ನೀಡಬಲ್ಲ ಹಾಗೂ 2047ಕ್ಕೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡಲು ಅಡಿಪಾಯ ಹಾಕಬಲ್ಲ ಬಜೆಟ್ ಎಂದು ಬಣ್ಣಿಸಲಾದ 2024-25ನೇ ಸಾಲಿನ ಮಂಗಡಪತ್ರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದರು.
ಮಂಗಳವಾರ ಮಂಡಿಸಿದ ಬಜೆಟ್ನಲ್ಲಿ ಹಲವು ಜನಪ್ರಿಯ ವಸ್ತುಗಳ ಮೇಲಿನ ತೆರಿಗೆ ಹಾಗೂ ಸುಂಕವನ್ನು ಏರಿಳಿಕೆ ಮಾಡಲಾಗಿದೆ.