ಲಡಾಖ್ನಲ್ಲಿ ನದಿಯೊಂದರಲ್ಲಿ ಕಾಣಿಸಿಕೊಂಡ ದಿಢೀರ್ ಪ್ರವಾಹದಲ್ಲಿ ಭಾರತೀಯ ಸೇನೆಯ 5 ಯೋಧರು ಕೊಚ್ಚಿಹೋದ ದುರ್ಘಟನೆ ಶನಿವಾರ ಸಂಭವಿಸಿದೆ. ಘಟನೆ ಕುರಿತು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಗಣ್ಯರು ಕಂಬನಿ ಮಿಡಿದಿದ್ದಾರೆ.