ಕಾನೂನು ಸುಧಾರಣೆಯ ಮೈಲುಗಲ್ಲು ಎನ್ನಬಹುದಾದ ಮಹತ್ವದ ಬೆಳವಣಿಗೆಯೊಂದು ದೇಶದಲ್ಲಿ ಜುಲೈ 1ರ ಸೋಮವಾರ ಘಟಿಸಲಿದ್ದು, ಬ್ರಿಟಿಷರ ಕಾಲದಿಂದಲೂ ಜಾರಿಯಲ್ಲಿದ್ದ ಭಾರತೀಯ ದಂಡಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ರದ್ದಾಗಲಿವೆ.