ಹಿಂದಿ ಹೇರಲ್ಲ, ಕರ್ನಾಟಕದ ಜತೆ ಕನ್ನಡದಲ್ಲೇ ನನ್ನಿಂದ ಪತ್ರ ವ್ಯವಹಾರ : ಅಮಿತ್ ಶಾಹಿಂದಿ ಭಾಷೆ ಹೇರಿಕೆ ವಿಚಾರವಾಗಿ ದಕ್ಷಿಣದ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಸಮರ ನಡೆಯುತ್ತಿರುವ ಹೊತ್ತಿನಲ್ಲಿಯೇ ಕೇಂದ್ರ ಸಚಿವ ಅಮಿತ್ ಶಾ ಅವರು, ಡಿಸೆಂಬರ್ನಿಂದ ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳ ಜತೆ ಅಧಿಕೃತ ಸಂವಹನವನ್ನು ಸ್ಥಳೀಯ ಭಾಷೆಯಲ್ಲಿಯೇ ನಡೆಸಲಾಗುತ್ತದೆ ಎಂದು ಘೋಷಿಸಿದ್ದಾರೆ.