ವಿಶ್ವಾದ್ಯಂತ 14000 ಸಿಬ್ಬಂದಿ ವಜಾಕ್ಕೆ ಅಮೆಜಾನ್ ನಿರ್ಧಾರ ಇ–ಕಾಮರ್ಸ್ ದೈತ್ಯ ಅಮೆಜಾನ್ ಕಂಪನಿ ಜಾಗತಿಕವಾಗಿ ವ್ಯವಸ್ಥಾಪಕ ಹುದ್ದೆಗಳಲ್ಲಿರುವ ತನ್ನ 14000ಕ್ಕೂ ಅಧಿಕ ನೌಕರರನ್ನು ವಜಾಗೊಳಿಸಲು ಮುಂದಾಗಿದೆ. ಈ ಕ್ರಮದಿಂದ ವ್ಯವಸ್ಥಾಪಕರ ಸಂಖ್ಯೆ 10,5770ರಿಂದ 91,936ಕ್ಕೆ ಇಳಿಯಲಿದೆ. ಅಲ್ಲದೆ, ಕಂಪನಿಗೆ 10-30 ಸಾವಿರ ಕೋಟಿ ರು. ಉಳಿತಾಯವಾಗಲಿದೆ ಎಂದು ವರದಿಗಳು ತಿಳಿಸಿವೆ.