ಭಾರತ-ಬ್ರಿಟನ್ ಮುಕ್ತ ವ್ಯಾಪಾರ ಒಪ್ಪಂದ ಸಾಕಾರಅಮೆರಿಕ ಜತೆಗಿನ ತೆರಿಗೆ ಸಂಘರ್ಷದ ನಡುವೆಯೇ ಮಹತ್ವದ ಬೆಳವಣಿಗೆಯಲ್ಲಿ ಭಾರತ ಮತ್ತು ಬ್ರಿಟನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಇದರೊಂದಿಗೆ, ಬ್ರಿಟನ್ ಭಾರತದೊಂದಿಗೆ ಈ ಒಪ್ಪಂದ ಮಾಡಿಕೊಂಡ 16ನೇ ದೇಶವಾಗಿದ್ದು, ಇನ್ನು ಉಭಯ ದೇಶಗಳ ನಡುವಿನ ವ್ಯಾಪಾರದ ಮೇಲಿನ ಆಮದು ತೆರಿಗೆಯಲ್ಲಿ ಶೇ.90ರಷ್ಟು ಇಳಿಕೆ ಆಗಲಿದೆ ಅಥವಾ ಸಂಪೂರ್ಣ ಇಲ್ಲವಾಗಲಿದೆ.