ಯೆಮೆನ್ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷ ಪ್ರಿಯಾಗೆ ಕ್ಷಮಾದಾನ ಕೊಡಿಸುವ ಸಂಧಾನ ಮಾತುಕತೆಯನ್ನು ಆಕೆಯ ಕುಟುಂಬದವರಷ್ಟೇ ನಡೆಸಬೇಕು. ಹೊರಗಿನವರಿಗೆ ಅವಕಾಶ ನೀಡುವುದು ಭದ್ರತೆ, ಇನ್ನಿತರ ಕಾರಣಗಳಿಂದ ಸಾಧುವಲ್ಲ’ ಎಂದು ಸುಪ್ರೀಂ ಕೋರ್ಟ್ಗೆ ಕೇಂದ್ರ ಸರ್ಕಾರ ತಿಳಿಸಿದೆ.
ವಾಗ್ದಂಡನೆಗೆ ಶಿಫಾರಸು ಮಾಡಿರುವ ಸುಪ್ರೀಂ ಕೋರ್ಟ್ನ ಆಂತರಿಕ ವಿಚಾರಣಾ ಸಮಿತಿಯ ವರದಿಯನ್ನು ಅಮಾನ್ಯಗೊಳಿಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶ ನ್ಯಾ। ಯಶವಂತ್ ವರ್ಮಾ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಪಹಲ್ಗಾಂ ದಾಳಿಯ ರೂವಾರಿಗಳ ಹೆಡೆಮುರಿಕಟ್ಟುವ ವಿಚಾರದಲ್ಲಿ ಭಾರತಕ್ಕೆ ಮತ್ತೊಂದು ಮಹತ್ವದ ಗೆಲುವು ಸಿಕ್ಕಿದೆ. ಪಾಕ್ ಮೂಲದ ಲಷ್ಕರ್-ಎ-ತೊಯ್ಬಾದ (ಎಲ್ಇಟಿ) ಸಹ ಸಂಘಟನೆ ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್ಎಫ್) ಮೇಲೆ ನಿರ್ಬಂಧ ಹೇರಿರುವ ಅಮೆರಿಕ
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ಬಿಜೆಪಿ ಮತ್ತು ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ತನ್ನ ವಾಗ್ದಾಳಿ ಮುಂದುವರೆಸಿದೆ.
ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ಉದ್ಯೋಗ, ಶಿಕ್ಷಣ ಸಂಸ್ಥೆಗಳು ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗ (ಬಿ.ಸಿ.)ಗಳಿಗೆ ನೀಡಲಾಗುತ್ತಿರುವ ಮೀಸಲಾತಿಯನ್ನು ಶೇ.23ರಿಂದ ಶೇ.42ಕ್ಕೆ ಏರಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ಘೋಷಿಸಿದ್ದಾರೆ.
ಕಾರ್ಮಿಕರ ಭವಿಷ್ಯ ನಿಧಿ(ಪಿಎಫ್) ನಿಯಮಗಳಿಗೆ ಬದಲಾವಣೆ ತರುವ ಕುರಿತು ಪಿಎಫ್ ಮಂಡಳಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಪಾರಮ್ಯಕ್ಕಾಗಿ ಚೀನಾ, ಅಮೆರಿಕ, ರಷ್ಯಾ ನಡುವಿನ ಸಮರದ ನಡುವೆಯೇ, ಭೂಮಿಯಿಂದ 35000 ಕಿ.ಮೀ ಎತ್ತರದಲ್ಲಿ ಉಪಗ್ರಹವೊಂದಕ್ಕೆ ಇಂಧನ ತುಂಬಿಸುವ ಐತಿಹಾಸಿಕ ಸಾಧನೆಯೊಂದನ್ನು ಚೀನಾ ಮಾಡಿದೆ