ರಾಮಲಲ್ಲಾ ವಿಗ್ರಹ ಆಯ್ಕೆ ಘೋಷಣೆ 17ಕ್ಕೆ: ಟ್ರಸ್ಟ್ಡಿ.29ಕ್ಕೆ 11 ಟ್ರಸ್ಟಿಗಳಿಂದ ಮತದಾನ ಮೂಲಕ ವಿಗ್ರಹ ಆಯ್ಕೆ ಮಾಡಲಾಗಿದ್ದು, ಮತದಾನದ ಲಿಖಿತ ಮಾಹಿತಿಯನ್ನು ಟ್ರಸ್ಟ್ ಅಧ್ಯಕ್ಷರಿಗೆ ಹಸ್ತಾಂತರ ಮಾಡಲಾಗಿದೆ. ಆದರೆ ಅಂತಿಮ ಆಯ್ಕೆ ಯಾವುದು ಎಂದು ಇನ್ನೂ ಘೋಷಿಸಿಲ್ಲ. ಜ.17ಕ್ಕೆ ರಾಮಲಲ್ಲಾ ಮೂರ್ತಿ ಅನಾವರಣ ಮಾಡಲಾಗುವುದು ಎಂದು ಚಂಪತ್ ರಾಯ್ ತಿಳಿಸಿದ್ದಾರೆ. ಜೊತೆಗೆ ಕಂಚಿ ಶ್ರೀಗಳ ಜತೆ ಚರ್ಚೆ ಬಳಿಕ ಅಂತಿಮ ಆಯ್ಕೆ ಮಾಡುವುದಾಗಿ ಟ್ರಸ್ಟ್ ಅಧಿಕಾರಿ ಪ್ರಕಾಶ್ ಗುಪ್ತಾ ತಿಳಿಸಿದ್ದಾರೆ.