ಬಿಸಿಲಿನ ಬೇಗೆಗೆ ಬಸವಳಿದ ಜನಬೇಸಿಗೆ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಿದೆ. ರಣ ರಣ ಬಿಸಿಲಿಗೆ ಜನರು ಮನೆಯಿಂದ ಹೊರಗೆ ಬರಲು ಹಿಂದೇಟು ಹಾಕುವಂತಾಗಿದೆ. ಮಹಾಲಿಂಗಪುರ ತಾಲೂಕಿನಲ್ಲಿ ಬಿಸಿಲಿನ ಶಾಖಕ್ಕೆ ಹೈರಾಣಾಗುತ್ತಿದ್ದಾರೆ. ಏಪ್ರಿಲ್, ಮೇ ತಿಂಗಳಿನಲ್ಲಿ ಬಿಸಿಲು ಹೇಗಿರಬಹುದು ಎಂದು ಈಗಲೇ ಆತಂಕಗೊಳ್ಳುವಂತಾಗಿದೆ. ಇದರಿಂದಾಗಿ ಮನುಷ್ಯನನ್ನು ಅದು ನಿತ್ರಾಣಗೊಳಿಸುತ್ತದೆ. ಆದ್ದರಿಂದ ಬಿಸಿಲಿಗೆ ಹೆದರಿ ಜನರು ಕಲ್ಲಂಗಡಿ, ಮಜ್ಜಿಗೆಯಂತಹ ವಿವಿಧ ತಂಪು ಪಾನೀಯಗಳತ್ತ ಮೊರೆ ಹೋಗುತ್ತಿದ್ದಾರೆ.