ಬಣ್ಣದಲ್ಲಿ ಮಿಂದೆದ್ದ ಜಿಲ್ಲೆಯ ಜನಹೋಳಿ ಹಬ್ಬದ ಸಂಭ್ರಮ ಬಾಗಲಕೋಟೆ ಜಿಲ್ಲೆಯಾದ್ಯಂತ ಸೋಮವಾರ ಸಂಭ್ರಮದಿಂದ ಜರುಗಿತು. ಜಿಲ್ಲೆಯ ವಿವಿಧೆಡೆ ಯುವಕರು, ಯುವತಿಯರು, ಹಿರಿಯರು, ಕಿರಿಯರು ಜಾತಿ-ಮತ ಮೀರಿ ರಂಗಿನಾಟದಲ್ಲಿ ಮಿಂದೆದ್ದರು. ನಗರ ಹಾಗೂ ಗ್ರಾಮೀಣ ಪ್ರದೇಶಗಳೂ ಹೋಳಿಯ ನಾನಾ ಬಣ್ಣಗಳಲ್ಲಿ ಕಂಗೊಳಿಸಿದವು. ಜಾತಿ, ಮತ, ಧರ್ಮ, ಅಂತಸ್ತುಗಳ ಭೇದವನ್ನೇ ಮರೆತು ಜನ ಸಾಮರಸ್ಯ, ಸೌಹಾರ್ದದದ ಹಬ್ಬ ಆಚರಿಸಿದರು.