ಶೆಟ್ಟರ್ ಕಾಂಗ್ರೆಸ್ಗೆ ನೀಡಿದ ಕೊಡುಗೆ ಶೂನ್ಯ: ಎಸ್.ಜಿ. ನಂಜಯ್ಯನಮಠಬಾಗಲಕೋಟೆ: ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಂದ ಕೊಡುಗೆ ಶೂನ್ಯ. ಅವರಿಂದ ಪಕ್ಷಕ್ಕೆ ಲಾಭವಾಗಲಿಲ್ಲ. ಬದಲಾಗಿ ಹಾನಿ ಉಂಟು ಮಾಡ ಹೋಗಿದ್ದಾರೆ. ಅವರ ಧೋರಣೆ ಖಂಡಿಸುವುದಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು. ನವನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಯಾಕೆ ಬಿಜೆಪಿ ಬಿಟ್ಟು ಬಂದಿರಿ? ಬಿಡಲು ಏನು ತೊಂದರೆ ಆಗಿತ್ತು? ಆದರೂ ಬಿಜೆಪಿಯಲ್ಲಿ 6 ಬಾರಿ ಶಾಸಕ, ಮಂತ್ರಿ, ವಿರೋಧ ಪಕ್ಷದ ನಾಯಕ, ಸಭಾಪತಿ ಆಗಿ ಕೆಲಸ ಮಾಡಿದ್ರಿ ಬಿಜೆಪಿ ಬಿಟ್ಟು ಬರುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.