ಮುಧೋಳದಲ್ಲಿ ಮೊಳಗಿದ ಜೈ ಶ್ರೀರಾಮ ಘೋಷಣೆಮುಧೋಳ: ಅಯೋಧ್ಯೆಯಲ್ಲಿ ಅಂದಾಜು ₹ 1100 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಶ್ರೀರಾಮ ಮಂದಿರ ಸೋಮವಾರ ಉದ್ಘಾಟನೆಯ ನಿಮಿತ್ತ ಶ್ರೀರಾಮನ ಭಕ್ತರು ಮುಧೋಳ ನಗರದ ವಿವಿಧ ಹಿಂದು ದೇವಾಲಯಗಳಲ್ಲಿ ವಿಶೇಷ ಪೂಜೆ, ಪುನಸ್ಕಾರ, ಮಂಗಳರಾತಿ, ದೀಪೋತ್ಸವ ಮತ್ತು ಅನ್ನ ಪ್ರಸಾದದ ವ್ಯೆವಸ್ಥೆ ಮಾಡಲಾಗಿತ್ತು. ಬಿಜೆಪಿ ಯುವ ಧುರೀಣ ಅರುಣ ಗೋವಿಂದ ಕಾರಜೋಳ ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ನಗರದ ಅಂಗಡಿಗಳಿಗೆ ತೆರಳಿ ಸಿಹಿ ಹಂಚಿದರು.ಸಂದರ್ಭದಲ್ಲಿ ಶ್ರೀರಾಮ ಭಕ್ತರಾದ ಸೋನಾಪ್ಪಿ ಕುಲಕರ್ಣಿ, ರಾಜು ಯಡಹಳ್ಳಿ, ಸಂತೋಷ ಘೋರ್ಪಡೆ ಸೇರಿದಂತೆ ಇತರರು ಇದ್ದರು.