ಬಾಗಲಕೋಟೆ ಎಫ್ಎಂ ಕೇಂದ್ರಕ್ಕೆ ಸಂಸದ ಪಿ.ಸಿ. ಗದ್ದಿಗೌಡರ ಚಾಲನೆಬಾಗಲಕೋಟೆ: ಬಹು ದಿನಗಳ ಬೇಡಿಕೆಯಾಗಿದ್ದ ಪ್ರಸಾರ ಭಾರತೀಯ ಆಕಾಶವಾಣಿ ಎಫ್.ಎಂ ಕೇಂದ್ರಕ್ಕೆ ಸಂಸದ ಪಿ.ಸಿ.ಗದ್ದಿಗೌಡರ ಶುಕ್ರವಾರ ಚಾಲನೆ ನೀಡಿದರು. ಮದರಾಸ ನಿಂದ ವಿಡಿಯೋ ವರ್ಚ್ಯುವಲ್ ಮೂಲಕ ಪ್ರಧಾನಿ ಮೋದಿಯವರು ಏಕ ಕಾಲಕ್ಕೆ 4 ಎಫ್ಎಂ ಕೇಂದ್ರ ಹಾಗೂ 2 ಶಿಲಾನ್ಯಾಸ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಕಾರ್ಯಕ್ರಮವನ್ನು ವೀಕ್ಷಿಸಿ ನಂತರ ಬಾಗಲಕೋಟೆ ಆಕಾಶವಾಣಿ ಎಫ್.ಎಂ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 10 ವರ್ಷಗಳಿಂದ ಬೇಡಿಕೆಯಲ್ಲಿರುವ ಆಕಾಶವಾಣಿ ಎಫ್ಎಂ ಕೇಂದ್ರ ತಾಂತ್ರಿಕ ಕಾರಣಗಳಿಂದ ಪ್ರಾರಂಭಗೊಂಡಿರಲಿಲ್ಲ. ಈಗ ಅದು ಸಾಕಾರಗೊಂಡಿದೆ ಎಂದರು.