ಬ್ರಾಹ್ಮಣ ಸಮಾಜದಿಂದ ರಾಮ ತಾರಕಮಂತ್ರ ಹೋಮಇಳಕಲ್ಲ: ಅಯೋಧ್ಯಾ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ಇಳಕಲ್ಲ ವೆಂಕಟೇಶ ದೇವಸ್ಥಾನದಲ್ಲಿ ಸೋಮವಾರ ಮುಂಜಾನೆಯಿಂದ ಪಾರಾಯಣ, ರಾಮತಾರಕ ಮಂತ್ರಾಂಗ ಹೋಮ, ಅನ್ನಸಂತರ್ಪಣೆ, ದೀಪೋತ್ಸವ, ಸಾಮೂಹಿಕ ಭಜನೆ, ತೊಟ್ಟಿಲೋತ್ಸವ ಇತರ ಕಾರ್ಯಕ್ರಮಗಳು ನಡೆದವು. ಬ್ರಾಹ್ಮಣ ಸಮಾಜದ ಅಧ್ಯಕ್ಷ ಪಾಂಡುರಂಗ ಕುಲಕರ್ಣಿ ನೇತೃತ್ವದಲ್ಲಿ ನಡೆದ ಎಲ್ಲ ಕಾರ್ಯಕ್ರಮಗಳಲ್ಲಿ ಹಿರಿಯರು, ಯುವಕರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.