ಸಂಘ ಪರಿವಾರದ ಪ್ರಮುಖ ಪ್ರಫುಲ್ದಾದಾ ದೇಶಪಾಂಡೆ ಇನ್ನಿಲ್ಲಸಂತಾಪ: ಶಾಸಕ ಸಿದ್ದು ಸವದಿ, ಸುರೇಶ ರೇಣಕೆ, ಬಸವರಾಜ ಬಾಳಿಕಾಯಿ, ಸಿದ್ದು ಅಮ್ಮಣಗಿ, ಮಹಾವೀರ ಕೊಕಟನೂರ, ಮುರುಗೇಶ ಮಿರ್ಜಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ತೇರದಾಳ(ರ-ಬ): ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಧುರೀಣ ಪ್ರಫುಲ್ದಾದಾ ದೇಶಪಾಂಡೆ (84) ತೇರದಾಳ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಸೇರಿದಂತೆ ಬಂಧು-ಬಳಗ ಇದೆ.