ಸ್ವಾಮಿ ವಿವೇಕಾನಂದರ ಪುಸ್ತಕ ಪ್ರದರ್ಶನಇಳಕಲ್ಲ: ನಗರದ ಗಾಯತ್ರಿ ಮಹಿಳಾ ಸಂಘದ ಕನ್ನಡ ಶಿಶುವಿಹಾರ ಹಾಗೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ 161ನೇ ಜಯಂತ್ಯುತ್ಸವ ಆಚರಿಸಲಾಯಿತು. ಸ್ವಾಮಿ ವಿವೇಕಾನಂದ ಜೀವನ ಸಾಧನೆ ಕುರಿತಾದ ಪುಸ್ತಕ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಕ್ಷಕರಾದ ಮಂಜುನಾಥ ಕನ್ನೂರ ವಂದಿಸಿದರು. ಶಿಕ್ಷಕಿ ವೇದಾವತಿ ದಟ್ಟಿ ನಿರೂಪಿಸಿದರು .ಶಿಕ್ಷಕರಾದ ಅಂಬಣ್ಣ ಯರಗೇರಿ ಶಿಕ್ಷಕಿಯರಾದ ಮಾಲಾ ಕೊಳದೂರ, ಲಕ್ಷ್ಮೀ ಪುರೋಹಿತ, ಕಾಮಾಕ್ಷಿ ಹೂಲಗೇರಿ, ಚೌಡಮ್ಮ ಮೆದಿಕೇರಿ, ಸಿದ್ದಮ್ಮ ಜೋಗಿನ, ಶ್ರುತಿ ಪರದೇಸಿ, ಸುನಿತಾ ಮಸ್ಕಿ ಹಾಗೂ ಸಿಬ್ಬಂದಿ ಮತ್ತು ಪಾಲಕರು ಹಾಜರಿದ್ದರು.