ಅವಕಾಶ ಕೊಡಿ, ಸಂಸತ್ತಲ್ಲಿ ನಿಮ್ಮ ದನಿಯಾಗುವೆಕನ್ನಡಪ್ರಭ ವಾರ್ತೆ ಬಾಗಲಕೋಟೆ ಹೊಸ ಕನಸು ಕಟ್ಟಿಕೊಂಡು ಬಾಗಲಕೋಟೆ ಜಿಲ್ಲೆಯಲ್ಲಿ ಹೊಸ ಅಧ್ಯಾಯ ಆರಂಭದ ಆಶಯ ಹೊಂದಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ ಹೇಳಿದರು.ಬಾದಾಮಿ ತಾಲೂಕಿನ ಕಟಗೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಯೋಜನೆಗಳನ್ನು ಬಿಡಿಸಿಟ್ಟರು.