ಸಂಚಾರ ದುಸ್ತರ<bha>;</bha> ಜನರಿಗೆ ಸಂಚಕಾರಕಲಾದಗಿ-ಕಾಗವಾಡ ರಾಜ್ಯ ಹೆದ್ದಾರಿಗೆ ಸಂಬಂಧಿಸಿದಂತೆ ಬನಹಟ್ಟಿಯಲ್ಲಿ ಇಕ್ಕಟ್ಟಾದ ರಸ್ತೆಯಿಂದ ಪ್ರತಿದಿನ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ, ವಾಹನ ಸವಾರರಿಗೆ ತೀವ್ರ ತೊಂದರೆಯಾಗಿದೆ. ರಬಕವಿಗೆ ಇರುವ ಇಕ್ಕಟ್ಟಾಗಿರುವ ವರಕವಿ ಈಶ್ವರ ಸಣಕಲ್ ಹೆಸರಿನ ಒಂದೇ ಮುಖ್ಯ ರಸ್ತೆಯಲ್ಲಿ ದಿನವಿಡೀ ಸಂಚಾರ ದಟ್ಟಣೆಯಾಗುತ್ತಿದೆ. ಹೀಗಾಗಿ ಇಲ್ಲಿ ಸಂಚಾರ ಎಂದರೆ ತೀರಾ ದುಸ್ತರವಾಗಿದೆ.