ಬಾಹ್ಯ ಜಗತ್ತಿನ ಆಕರ್ಷಣೆಗೆ ಬಲಿಯಾಗಬೇಡಿಮಕ್ಕಳು ಕೇವಲ ಅಕ್ಷರ ಜ್ಞಾನ, ಅಂಕ, ನೌಕರಿಗಾಗಿ ಓದುತ್ತಿದ್ದು, ಸಂಸ್ಕಾರವನ್ನು ಮರೆತು ದೇಶಕ್ಕೆ ಮಾರಕವಾಗುತ್ತಿರುವುದನ್ನು ಕಂಡು ವ್ಯಥೆ ಪಟ್ಟು ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಸಲುವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಇಡೀ ರಾಜ್ಯ ಸುತ್ತುತ್ತಾ ಉಚಿತವಾಗಿ ಶಾಲಾ ಮಕ್ಕಳಿಗೆ ಉಪನ್ಯಾಸ ನೀಡುತ್ತಿರುವುದು ಮಾದರಿ ಕೆಲಸ.