ವಿಜಯಪುರ ಜಿಲ್ಲೆಯಲ್ಲೇ ಮುಂದುವರಿಸಲು ದೇವರಹಿಪ್ಪರಗಿ ಪಪಂ ಸದಸ್ಯರ ಆಗ್ರಹದೇವರಹಿಪ್ಪರಗಿ: ನೂತನ ತಾಲೂಕು ಆಗಿ 8 ವರ್ಷ ಗತಿಸಿದರೂ ಅಭಿವೃದ್ಧಿ ಮರೀಚಿಕೆ ಆಗಿದೆ. ಮೂರು ಪಕ್ಷಗಳು ಅಧಿಕಾರ ನಡೆಸಿದರೂ ನೂತನ ತಾಲೂಕಿಗೆ ಬೇಕಾದ ಕಚೇರಿಗಳನ್ನು ತರಲು ವಿಫಲರಾಗಿದ್ದಾರೆ. ಸರ್ಕಾರ ಇಂಡಿ ಹೊಸ ಜಿಲ್ಲೆ ಮಾಡುವುದಾದರೆ ಅದಕ್ಕೆ ನಮ್ಮ ತಾಲೂಕು ಸೇರಿಸಬೇಡಿ, ವಿಜಯಪುರ ಜಿಲ್ಲೆಯಲ್ಲಿ ಮುಂದುವರಿಸಿ ಎಂದು ಪಪಂ ಸದಸ್ಯರಾದ ರಮೇಶ ಮಸಿಬಿನಾಳ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.