ಮುಂಗಾರು ಮಳೆ ಉತ್ತಮವಾಗಲಿ ಎಂದು ಬೇಡಿಕೊಂಡ ಸಿಎಂವಿಜಯಪುರ: ಸುಕ್ಷೇತ್ರ ದ್ಯಾಬೇರಿಯ ತಾಯಿ ವಾಗ್ದೇವಿ ಸನ್ನಿಧಿಯಲ್ಲಿ ನಡೆದ ನೂತನ ದೇವಾಲಯ ಕಟ್ಟಡ ಲೋಕಾರ್ಪಣೆ, ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.ಬಳಿಕ ಮಾತನಾಡಿದ ಅವರು, ಮುಂದಿನ ಮುಂಗಾರಿನಲ್ಲಿ ಉತ್ತಮ ಮಳೆಯಾಗಿ ಪ್ರತಿಯೊಬ್ಬರೂ ಸುಖ, ಸಮೃದ್ಧಿಯಿಂದ ಜೀವನ ನಡೆಸಲಿ ಎಂದು ತಾಯಿ ವಾಗ್ದೇವಿಯಲ್ಲಿ ಪ್ರಾರ್ಥಿಸಿರುವೆ ಎಂದು ಹೇಳಿದರು.