ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಗೆ ಪ್ರಜ್ವಲ್, ಪೃಥ್ವಿ ಆಯ್ಕೆಮಹಾಲಿಂಗಪುರ: ಸಮೀಪದ ಕೆಸರಗೊಪ್ಪ ಗ್ರಾಮದ ಪ್ರಜ್ವಲ್ ಬ್ಯಾಕೋಡ ಮತ್ತು ಪೃಥ್ವಿ ಬ್ಯಾಕೋಡ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ಶಿಕ್ಷಕ ಧರೆಪ್ಪ ಮಾ.ಬ್ಯಾಕೋಡ ಮತ್ತು ಶಿಕ್ಷಕಿ ಸವಿತಾ ಇವರ ಪುತ್ರ ಪ್ರಜ್ವಲ್ 16 ವರ್ಷ ವಯೋಮಿತಿಯ 60 ಮೀ, 80 ಮೀ ಹಡಲ್ಸ್, ಗುಂಡು ಎಸೆತ, ಉದ್ದ ಜಿಗಿತ, 600 ಮೀ.ಓಟ ಹಾಗೂ ಮಗಳು ಪೃಥ್ವಿ 14 ವರ್ಷ ವಯೋಮಿತಿಯ 60 ಮೀ.ಓಟ, ಉದ್ದ ಜಿಗಿತ ಹಾಗೂ 600 ಮೀ ಓಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದು ಫೆ.16 ರಿಂದ 18 ರವರೆಗೆ ಗುಜರಾತಿನ ಅಹಮದಾಬಾದನಲ್ಲಿ ನಡೆಯುವ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.