ಕರ್ತವ್ಯ ಪಾಲನೆ ಸಂವಿಧಾನ ಗೌರವಿಸಿದಂತೆ: ನಂದಾ ಹನಮರಟ್ಟಿಕಲಾದಗಿ: ಸಂವಿಧಾನದಲ್ಲಿ ದೇಶದ ಪ್ರಜೆಗಳಿಗೆ ವಿವಿಧ ಹಕ್ಕು ನೀಡಲಾಗಿದೆ, ಅವುಗಳನ್ನು ಪಡೆಯುವಂತೆ ಸಂವಿಧಾನದಲ್ಲಿ ನೀಡಲಾದ ಕರ್ತವ್ಯ ಸಾಲಿಸುವುದು ಸಹ ನಮ್ಮ ಕರ್ತವ್ಯವಾಗಿದೆ. ಚಿಕ್ಕ ಚಿಕ್ಕ ಕರ್ತವ್ಯಗಳನ್ನು ಪಾಲಿಸುವುದೂ ಸಹ ಸಂವಿಧಾನ ಗೌರವಿಸಿದಂತೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ನಂದಾ ಹನಮರಟ್ಟಿ ಹೇಳಿದರು. ಖಜ್ಜಿಡೋಣಿ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಜಾಥಾ, ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯುಧವನ್ನು ಹಿಡಿದು ಹೋರಾಡುವವರನ್ನು ಸೋಲಿಸಬಹುದು. ಆದರೆ ಪುಸ್ತಕವನ್ನು ಹಿಡಿದು ಹೋರಾಡುವವರನ್ನು ಸೋಲಿಸಲಾಗದು.