ಸಮಸಮಾಜ ನಿರ್ಮಾಣದಲ್ಲಿ ಸಂವಿಧಾನದ ಕೊಡುಗೆ ಅಪಾರ: ಭೀಮಸೇನ ಚಿಮ್ಮನಕಟ್ಟಿಗುಳೇದಗುಡ್ಡ: ಈ ದೇಶದ ಎಲ್ಲರ, ಅದರಲ್ಲಿಯೂ ತಳಸಮುದಾಯಗಳ, ಶೋಷಿತರ ಆಶಾಕಿರಣವಾಗಿದ್ದೆ. ಭಾರತದ ಸಂವಿಧಾನ, ಸಮಾನತೆ, ಶೋಷಿತರ ರಕ್ಷಣೆ, ನಮ್ಮ ಹಕ್ಕು ಮತ್ತು ಕರ್ತವ್ಯಗಳ ಪರಿಪಾಲನೆಯಲ್ಲಿ ಸಮಸಮಾಜದ ನಿರ್ಮಾಣದಲ್ಲಿ ಸಂವಿಧಾನದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು. ಗುರುವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.