ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತಇಳಕಲ್ಲ: ತಾಲೂಕಿಗೆ ಆಗಮಿಸಿದ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಜ್ಯೋತಿ ರಥಯಾತ್ರೆಗೆ ಇಳಕಲ್ಲ ತಾಲೂಕಿನ ಕರಡಿ ಗ್ರಾಮದಲ್ಲಿ ತಾಲೂಕಾಡಳಿತದ ಪರವಾಗಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಕೋಡಿಹಾಳ, ಹರಿಣಾಪೂರ, ಕಂಬಳಿಹಾಳ, ನಂದವಾಡಗಿ, ಆದಾಪೂರ, ತುಂಬ ಇಂಗಳಗಿ, ಗೊರಬಾಳ ಗ್ರಾಮಸ್ಥರು ರಥಯಾತ್ರೆಗೆ ಹಾರ ಹಾಕಿ ಕನ್ನಡ ಘೋಷಣೆಗಳ ಮುಖಾಂತರ ಕನ್ನಡಾಂಬೆಯ ರಥಯಾತ್ರೆ ಸ್ವಾಗತಿಸಿದರು.