ಅಂಬಾಭವಾನಿ ಜಾತ್ರಾ ಮಹೋತ್ಸವಕ್ಕೆ ಚಾಲನೆಸಾವಳಗಿ: ಗ್ರಾಮದ ಆರಾಧ್ಯದೇವಿ ಅಂಭಾಭವಾನಿ ದೇವಿ ದೇವಸ್ಥಾನ ಜಾತ್ರಾ ಮಹೋತ್ಸವಕ್ಕೆ ಶುಕ್ರವಾರ ಪೊಲೀಸ್ ಠಾಣೆಯ ಪಿಎಸ್ಐ ಗಂಗಾಧರ ಪೂಜೇರಿ ಜಾತ್ರೆಗೆ ಚಾಲನೆ ನೀಡಿದರು. ಬೆಳಗ್ಗೆ ರಥಸಪ್ತಮಿ ಹಾಲು ಉಕ್ಕಿಸುವುದು, ಶಾಂತಿಪುಷ್ಠಿ, ಮಹಾಭಿಷೇಕ, ಚಂಡಿಕಾಮಂಡಲ, ಪುಣ್ಯವಾಚನ, ಚಂಡಿಕಾ ಪಾರಾಯಣ, ರಾತ್ರಿ ಸಂಗಮೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿದವು.