ಗೋಲಭಾವಿಯಲ್ಲಿ ಸಂವಿಧಾನ ಜಾಗೃತಿ ಜಾಥಾರಬಕವಿ-ಬನಹಟ್ಟಿ: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತಿ ಬಾಗಲಕೋಟೆ, ಸಮಾಜ ಕಲ್ಯಾಣ ಇಲಾಖೆ, ತಾಲೂಕು ಪಂಚಾಯತಿ ರಬಕವಿ-ಬನಹಟ್ಟಿ, ಗ್ರಾಮ ಪಂಚಾಯತಿ ಗೋಲಭಾವಿ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾ ನಡೆಯಿತು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ ಲಕ್ಕಪ್ಪ ಮಾಂಗ ಜಾಥಾಗೆ ಚಾಲನೆ ನೀಡಿದರು. ಗ್ರಾಪಂ ಸದಸ್ಯರು, ಶಾಲಾ ಮಕ್ಕಳು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.