ತೋಟದಲ್ಲಿ ಯುಗಾದಿ ಸಂಭ್ರಮಗುಳೇದಗುಡ್ಡ: ಪಟ್ಟಣದ ಹೊರವಲಯದ ತೂಗುಣಸಿ ಕ್ರಾಸ್ ಹತ್ತಿರ ಇರುವ ಪಂಪಾಪತಿ ಹೆಗಡೆಯವರ ತೋಟದಲ್ಲಿ ಯುಗಾದಿ ಪಾಡ್ಯದ ದಿನ ಯುಗಾದಿ ಸಂಭ್ರಮ ಆಚರಣೆ ವಿಶಿಷ್ಟವಾಗಿ ನಡೆಯಿತು. ಬೆಳಿಗ್ಗೆ ಭೂತಾಯಿ, ನೇಗಿಲ ಮುಂತಾದ ಪೂಜೆ ನೆರವೇರಿತು. ನಂತರ ಶಿವು ಉದ್ನೂರ ಕಲಾ ತಂಡದ ಸದಸ್ಯರಾದ ಅನಿಲ್ ಬುಳ್ಳಾ, ಹುಚ್ಚೇಶ ಮೇಟಿ, ಶಂಕರ ಸಣಪಾ ಅವರು ಕನ್ನಡ ಮತ್ತು ಜಾನಪದ ಹಾಡುಗಳನ್ನು ಹಾಡಿದರು.