ಭಕ್ತಿ ಇದ್ದಲ್ಲಿ ಭಗವಂತ, ಭಗವಂತನಿದ್ದಲ್ಲಿ ನೆಮ್ಮದಿ: ಗಂಗಾಧರ ಶಿವಾಚಾರ್ಯರುಕಲಾದಗಿ: ಉದಗಟ್ಟಿ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ, ಮಹಾಪುರಾಣ ಮಂಗಲ ಧರ್ಮ ಸಮಾರಂಭ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಮಹಾತಪಸ್ವಿ ಶ್ರೀ ಗುರುಲಿಂಗೇಶ್ವರ ಮಹಾಶಿವಯೋಗಿಗಳ ಮಹಾಪುರಾಣ ಪ್ರವಚನ ಪ್ರಾರಂಭೊತ್ಸವ ಕಾರ್ಯಕ್ರಮ ನಡೆಯಿತು.ಕಲಾದಗಿಯ ಶ್ರೀ ಗುರುಲಿಂಗೇಶ್ವರ ಸಂಸ್ಥಾನ ಪಂಚಗ್ರಹ ಹಿರೇಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲಿ ಭಕ್ತಿ ಇರುತ್ತದೆ ಅಲ್ಲಿ ಭಗವಂತ,ಎಲ್ಲಿ ಭಗವಂತ ಇರುತ್ತಾನೋ ಅಲ್ಲಿ ಭಕ್ತಿ,ನೆಮ್ಮದಿ, ಸುಖ ಸಂಪತ್ತು ಐಶ್ವರ್ಯ ಇದ್ದು, ಭಕ್ತಿ ಇರುವೆಡೆ ಗುರು, ಭಗವಂತನ ಆಗಮವಾಗಿ ಕಷ್ಟ, ನಷ್ಟ, ದೂರವಾಗುತ್ತವೆ ಎಂದು ಹೇಳಿದರು.