ಡಾ.ಅಂಬೇಡ್ಕರ್ರನ್ನು ಜಾತಿಗೆ ಸೀಮಿತಗೊಳಿಸದಿರಿ: ಸಂಪತ್ ಲಮಾಣಿಕಲಾದಗಿ: ದೇಶದ ಇಡೀ ಸಮಾಜದಲ್ಲಿ ಸಮಾನತೆ, ಸಹಬಾಳ್ವೆ ಇಂದು ಜೀವಂತಿಕೆ ಇದೆ ಅಂದರೆ ಅದು ಅಂಬೇಡ್ಕರ್ ಅವರು ನೀಡಿದ ಶ್ರೇಷ್ಠ ಸಂವಿಧಾನದಿಂದ, ಸರ್ವರಿಗೂ ಸಮಬಾಳು, ಸಮಪಾಲು, ಇಡೀ ಸಂವಿಧಾನದ ಆಶಯವನ್ನು ಪೂರ್ವ ಪೀಠಿಕೆಯಲ್ಲಿ ತಿಳಿಸಿದ್ದಾರೆ ಎಂದು ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಸಂಪತ್ ಲಮಾಣಿ ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಗಲಕೋಟೆ ತಾಲೂಕಿನ ಸಂವಿಧಾನ ಜಾಗೃತಿ ಜಾಥಾ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರ್ಕಾರದ ಆಯ್ಕೆಗೆ ಜನರಿಗೆ ಮತಾಧಿಕಾರಿ ನೀಡಲಾಗಿದೆ.