ವಕ್ಫ್ ಬೋರ್ಡ್ ವಿರುದ್ಧ ಬಾರುಕೋಲು ಚಳವಳಿಕನ್ನಡಪ್ರಭ ವಾರ್ತೆ ಬೀಳಗಿ ರೈತರ ಜಮೀನನ್ನು ವಕ್ಫ್ ಬೋರ್ಡ್ ಆಕ್ರಮಿಸಿಕೊಂಡಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಬುಧವಾರ ಅನಗವಾಡಿ ಗ್ರಾಮದಲ್ಲಿ ಬಾರುಕೋಲು ಚಳವಳಿ ನಡೆಸಿತು. ರೈತರ ವ್ಯವಹಾರಗಳಿಗೆ ವಕ್ಫ್ ನಡೆ ಅಡ್ಡಿಯಾಗಿದ್ದು, ಈ ಕೂಡಲೇ ಅದನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಮುಂದಾಗಬೇಕು ಎಂದು ರೈತರು ಇದೆ ವೇಳೆ ಆಗ್ರಹಿಸಿದರು.