369ನೇ ದಿನಕ್ಕೆ ಕಾಲಿಟ್ಟ ಭೂಸಂತ್ರಸ್ತರ ಧರಣಿರೈತರ ಜಮೀನಿನಲ್ಲಿ ಕಾರ್ಖಾನೆ ಸ್ಥಾಪಿಸಿ, ಇಲ್ಲವೇ ಜಮೀನುಗಳನ್ನು ರೈತರಿಗೆ ವಾಪಸ್ ನೀಡಿ ಎಂದು ಒತ್ತಾಯಿಸಿ ಕುರುಗೋಡು ಸಮೀಪದ ಕುಡುತಿನಿಯಲ್ಲಿ ಭೂಸಂತ್ರಸ್ತ ರೈತರ ಹೋರಾಟ ಸಮಿತಿ ವತಿಯಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 369ನೇ ದಿನಕ್ಕೆ ಕಾಲಿಟ್ಟಿದೆ. 13 ವರ್ಷಗಳ ಹಿಂದೆ ಕುಡುತಿನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್ಲು, ಜಾನೆಕುಂಟೆ, ಸಿದ್ದಮ್ಮನಹಳ್ಳಿ ಸೇರಿದಂತೆ ಇತರ ಗ್ರಾಮಗಳ ರೈತರಿಂದ ಕಡಿಮೆ ದರದಲ್ಲಿ ಲಕ್ಷ್ಮೀ ಮಿತ್ತಲ್, ಅಗರ್ವಾಲ್ ಇತರ ಕಾರ್ಖಾನೆ ಸ್ಥಾಪನೆಗಾಗಿ ಜಮೀನುಗಳನ್ನು ವಶಪಡಿಸಿಕೊಂಡು ಇಂದಿಗೂ ಯಾವುದೇ ಕಾರ್ಖಾನೆ ಸ್ಥಾಪಿಸದೇ ರೈತರಿಗೆ ಮೋಸ ಮಾಡಿದ್ದಾರೆ ಎಂದು ಭೂಮಾಲೀಕರು ಆರೋಪಿಸಿದರು.