ಇಂಗ್ಲಿಷ್ ಮೋಹ ಬಿಟ್ಟು ಮಾತೃಭಾಷೆಯಲ್ಲೇ ಶಿಕ್ಷಣ ಕೊಡಿಶ್ರೀರಾಮಕೃಷ್ಣರು, ಭಗವಾನ್ ಬುದ್ಧರ ತಪಸ್ಸಿನ ಶಕ್ತಿ, ವಿವೇಕಾನಂದರ ರಾಷ್ಟ್ರಪ್ರೇಮ, ಸಾವು ಬಂದರೂ ಜಗ್ಗದ ಹರಿಶ್ಚಂದ್ರನ ಸತ್ಯ ಪ್ರತಿಪಾದನೆ, ಶ್ರೀರಾಮಚಂದ್ರನ ಸಹೋದರ ಪ್ರೀತಿಗಳ ಕುರಿತು ಮಕ್ಕಳಿಗೆ ತಿಳಿಸಿಕೊಡಬೇಕು. ಮಹಾತ್ಮರು ಮಾತ್ರ ಮಕ್ಕಳ ಮೇಲೆ ಒಳ್ಳೆಯ ಪರಿಣಾಮ ಬೀರಲು ಸಾಧ್ಯವಿದ್ದು, ಶಿಕ್ಷನಾದವನು ತರಗತಿ ಕೋಣೆಯಲ್ಲಿ ಬಹಳ ಜಾಣ್ಮೆಯಿಂದ ಮಕ್ಕಳ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳ ವಿಚಾರಗಳನ್ನು ತಿಳಿಸುತ್ತಾ ಇರಬೇಕು