ರಾತ್ರೋರಾತ್ರಿ ಬೆಳೆನಾಶ: ರೈತರಿಂದ ದೂರು ದಾಖಲುಸರ್ವೆ ನಂ. ೬೦ರಲ್ಲಿನ ನಾಲ್ಕು ಎಕರೆ ಹಾಗೂ ಹೆಚ್ಚುವರಿ ೩ ಎಕರೆ ಭೂಮಿಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯನ್ನು ವೀಲ್ ಲೋಡರ್ ಬಳಸಿ ನಾಶಪಡಿಸಲಾಗಿದೆ. ಹೊಲದಲ್ಲಿದ್ದ ಪೇರಲ ಗಿಡ, ತೆಂಗಿನ ಮರ, ಸೀತಾಫಲ ಗಿಡಗಳನ್ನು ಹಾಗೂ ಹೊಲದಲ್ಲಿದ್ದ ಪೈಪ್ಲೈನ್ ಹಾಗೂ ಸ್ಪ್ರಿಂಕ್ಲರ್ ಪೈಪ್ಗಳನ್ನು ನಾಶ ಮಾಡಲಾಗಿದೆ. ಇದರಿಂದ ಲಕ್ಷಾಂತರ ರು. ಮೌಲ್ಯದ ಬೆಳೆ, ಕೃಷಿ ಉಪಕರಣಗಳು ನಾಶವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.