ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿ ಮನೆ- ಕಚೇರಿ ಮೇಲೆ ಲೋಕಾ ದಾಳಿಪರಿಶೀಲನೆ ವೇಳೆ ಚಂದ್ರಶೇಖರ್ ಅವರಿಗೆ ಸೇರಿದ 6 ನಿವೇಶನಗಳು, ₹1.47 ಲಕ್ಷ ನಗದು, 110 ಗ್ರಾಂ ಚಿನ್ನ, 330 ಗ್ರಾಂ ಬೆಳ್ಳಿ, ಒಂದು ಕಾರು ಇರುವುದು ಗೊತ್ತಾಗಿದೆ. ಹಗರಿಬೊಮ್ಮನಹಳ್ಳಿ, ಹೊಸಪೇಟೆಯ ಶ್ರೀರಾಮನಗರ ಹಾಗೂ ಕೊಪ್ಪಳದಲ್ಲಿ ಒಂದು ನಿವೇಶನ ಇರುವುದು ತಿಳಿದುಬಂದಿದೆ. ಇನ್ನು ಪರಿಶೀಲನೆ ಕಾರ್ಯ ನಡೆದಿದೆ ಎಂದು ಲೋಕಾಯುಕ್ತ ಎಸ್ಪಿ ಶಶಿಧರ್ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.