ಮೇಯರ್ ಚುನಾವಣೆಗೆ ರೆಸಾರ್ಟ್ ರಾಜಕೀಯ11 ಸದಸ್ಯರು ಅಜ್ಞಾತ ಸ್ಥಳಕ್ಕೆ ಶಿಫ್ಟ್!ಮೇಯರ್ ತ್ರಿವೇಣಿ ರಾಜೀನಾಮೆಯಿಂದ ತೆರವಾದ ಮೇಯರ್ ಸ್ಥಾನಕ್ಕೆ ನ. 28ರಂದು ನಿಗದಿಯಾಗಿತ್ತು. ಆದರೆ, ಮೇಯರ್ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಒಮ್ಮತ ಮೂಡದ ಹಿನ್ನೆಲೆ ಚುನಾವಣೆ ಮುಂದೂಡಲಾಯಿತು. ಇದೀಗ ಮತ್ತೆ ಚುನಾವಣೆಗೆ ದಿನಾಂಕ ನಿಗದಿಯಾಗುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಒಂದು ಬಣದ ಪಾಲಿಕೆ ಸದಸ್ಯರು ಕಾಣೆಯಾಗಿದ್ದಾರೆ.