ಸಿರಿಗೇರಿಯಲ್ಲಿ ಸಂಭ್ರಮದ ಕುಂಭೋತ್ಸವಕುರುಗೋಡು ಸಮೀಪದ ಸಿರಿಗೇರಿ ಗ್ರಾಮದಲ್ಲಿ ಶ್ರೀ ಮಾರಮ್ಮ ದೇವಿ, ಶ್ರೀ ದುಗಲಮ್ಮ ದೇವಿ, ಶ್ರೀ ಕೆಂಚಮ್ಮ ದೇವಿ, ಸುಂಕ್ಲಮ್ಮ ದೇವಿ, ಶ್ರೀ ಕುಂಬಾರ ದ್ಯಾವಮ್ಮ ದೇವಿ, ಶ್ರೀ ಕುರುಬರ ದ್ಯಾವಮ್ಮ ದೇವಿ, ಶ್ರೀ ಗರ್ಜಿನ ಗಡ್ಡೆ ತಾಯಮ್ಮ ದೇವಿ, ಶ್ರೀ ಸಿರಿಗೇರಮ್ಮ ದೇವಿ, ಶ್ರೀ ಕಾಳಿಕಾದೇವಿ ದೇವತೆಗಳಿಗೆ ಮಹಾ ಪ್ರಸಾದ ಸಮರ್ಪಿಸಿ, ಡೊಳ್ಳು, ಕಳಸ ಮೇಳದೊಂದಿಗೆ ಬುಧವಾರ ಬೆಳಗಿನ ಜಾವ ಕುಂಭೋತ್ಸವ ಆಚರಣೆ ಮಾಡಲಾಯಿತು.