ಉಪ್ಪಾರಹಳ್ಳಿಯಲ್ಲಿಲ್ಲ ಮೊಬೈಲ್ ನೆಟ್ವರ್ಕ್ಹಣ ವರ್ಗಾವಣೆ, ತರಗತಿಗಳು, ಉದ್ಯೋಗ, ಪರಸ್ಪರ ಮಾಹಿತಿ ವಿನಿಮಯ ಸೇರಿದಂತೆ ಅನೇಕ ಆನ್‌ಲೈನ್‌ನಿಂದಾಗುವ ಚಟುವಟಿಕೆಗಳಿಗೆ ನೆಟ್‌ವರ್ಕ್ ಅತ್ಯವಶ್ಯಕವಾಗಿದೆ. ಡಿಜಿಟಲ್ ತಂತ್ರಜ್ಞಾನದಲ್ಲಿ ನಮ್ಮ ದೇಶ ಜಾಗತಿಕ ಮಟ್ಟದಲ್ಲಿ ಮುನ್ನುಗುತ್ತಿದೆಯಲ್ಲದೇ, ಇಡೀ ಜಗತ್ತು 5ಜಿ ನೆಟ್‌ವರ್ಕ್‌ನತ್ತ ದಾಪುಗಾಲು ಹಾಕುತ್ತಿರುವ ಇಂತಹ ಕಾಲಘಟ್ಟದಲ್ಲಿ ಉಪ್ಪಾರಹಳ್ಳಿ ಗ್ರಾಮದ ಯಾವ ಮೂಲೆಯಲ್ಲಿಯೂ ನೆಟ್‌ವರ್ಕ್ ದೊರೆಯುತ್ತಿಲ್ಲ.