ಸಮಾಜಮುಖಿ ಕಾರ್ಯಗಳಿಗೆ ಕೈಜೋಡಿಸಿದ ಗುರುಸಿದ್ಧ ಶ್ರೀ: ಡಾ.ಪ್ರಭಾಕರ ಕೋರೆಕೆಎಲ್ಇ ಸಂಸ್ಥೆಗೆ ಕಾರಂಜಿಮಠ ನೀಡಿದ ದೇಣಿಗೆ ಸದಾಕಾಲ ಸ್ಮರಿಸಿಕೊಳ್ಳುವಂತದ್ದು . ಹಲವಾರು ಸಂಸ್ಥೆಗಳಿಗೆ ದೇಣಿಗೆ ನೀಡಿದ ಕಾರಂಜಿಮಠ ದಾನಮ್ಮದೇವಿ ದೇವಸ್ಥಾನ ಸೇರಿದಂತೆ ಬಹಳಷ್ಟು ಕಡೆ ಬೆಳವಣಿಗೆಗೆ ಅನುಕೂಲ ಮಾಡಿದೆ. ಆದರೆ, ಎಲ್ಲಿಯೂ ಹೇಳಿಕೊಂಡಿಲ್ಲ. ಶ್ರೀಗಳದ್ದು ಯಾವಾಗಲೂ ನೀಡುವ ಕೈ. ತಾವು ಮಾಡಿದ ಕಾರ್ಯಗಳಿಗೆ ಪ್ರಚಾರ ಬಯಸಿದವರಲ್ಲ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.