ಸಂಪಗಾಂವ ಗ್ರಾಮದ ಸರ್ಕಾರಿ ಜಮೀನು ಕೂಡಾ ವಕ್ಫ್ ಆಸ್ತಿ!ಸ್ಮಶಾನ ಭೂಮಿ, ಸರ್ಕಾರಿ ಆಸ್ತಿ, ರೈತರ ಜಮೀನಿಗೆ ವಕ್ಕರಿಸಿದ ವಕ್ಫ್ ತಾಲೂಕಿನ ಜನತೆಯ ನಿದ್ದೆಗೆಡಿಸಿದೆ. ಸಾರ್ವಜನಿಕರು ಭಯದ ವಾತಾವರಣದಲ್ಲಿಯೇ ತಮ್ಮ ಪಹಣಿ ಪತ್ರಿಕೆಗಳನ್ನು ಪರಿಶೀಲಿಸುತ್ತಿದ್ದಾರೆ. ರಾಯಣ್ಣನ ಹುಟ್ಟೂರು ಸಂಗೊಳ್ಳಿ, ಮಲ್ಲಮ್ಮನ ಬೆಳವಡಿ ಸ್ಮಶಾನ ಭೂಮಿಯ ಪಹಣಿಯಲ್ಲಿ ವಕ್ಫ್ ದಾಖಲಾತಿಯ ನಂತರ ಈಗ ಸಂಪಗಾಂವ ಗ್ರಾಮದ ಸರ್ಕಾರಿ ಜಮೀನು ಕೂಡ ವಕ್ಫ್ ಆಸ್ತಿ ಎಂದು ದಾಖಲಾದ ಮಾಹಿತಿಯನ್ನು ಸಾರ್ವಜನಿಕರು ಬಹಿರಂಗಪಡಿಸಿದ್ದಾರೆ.