ಖಾನಾಪುರದಲ್ಲಿ ರಾಜ್ಯೋತ್ಸವ ಅದ್ಧೂರಿಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿದ ತಾಯಿ ಭುವನೇಶ್ವರಿಯ ಪುತ್ಥಳಿಯ ಮೆರವಣಿಗೆ ಗಡಿಭಾಗದಲ್ಲಿ ಕನ್ನಡದ ಕಂಪು ಪಸರಿಸುವಲ್ಲಿ ಯಶಸ್ವಿಯಾಯಿತು. ಹಳೆಯ ತಹಸೀಲ್ದಾರ್ ಕಚೇರಿಯಿಂದ ಪ್ರಾರಂಭಗೊಂಡ ಮೆರವಣಿಗೆಗೆ ಶಾಸಕ ವಿಠ್ಠಲ ಹಲಗೇಕರ, ಅವರೊಳ್ಳಿ-ಬಿಳಕಿ ರುದ್ರಸ್ವಾಮಿ ಮಠದ ಚನ್ನಬಸವದೇವರು, ಎಸಿಎಫ್ ಸುನೀತಾ ನಿಂಬರಗಿ, ಡಿಎಸ್‌ಪಿ ರವಿ ನಾಯ್ಕ, ತಹಸೀಲ್ದಾರ್ ಪ್ರಕಾಶ ಗಾಯಕವಾಡ, ತಾಪಂ ಇಒ ರಾಜೇಂದ್ರ ಜಾಧವ, ನೌಕರರ ಸಂಘದ ಅಧ್ಯಕ್ಷ ಬಸವರಾಜ ಯಳ್ಳೂರ, ಕಸಾಪ ಅಧ್ಯಕ್ಷ ಬಸವಪ್ರಭು ಹಿರೇಮಠ ಹಾಗೂ ಇತರರು ಚಾಲನೆ ನೀಡಿದರು.