ಬಿಮ್ಸ್‌ನಲ್ಲಿ ಅವ್ಯಾಸ್ಕುಲಾರ್ ನೆಕ್ರೋಸಿಸ್‌ಗೆ ಶಸ್ತ್ರಚಿಕಿತ್ಸೆಬೆಳಗಾವಿ ಯ ಬಿಮ್ಸ್ ಆಸ್ಪತ್ರೆಯ ಎಲುವು ಮತ್ತು ಕೀಲುಗಳ ವಿಭಾಗದಲ್ಲಿ ಪ್ರಾಕ್ಸಿಮಲ್ ಹ್ಯೂಮರಸ್ (ಕೈ ಮೂಳೆ) ಅವ್ಯಾಸ್ಕುಲಾರ್ ನೆಕ್ರೋಸಿಸ್ ಎಂಬ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆಯನ್ನು ಡಾ.ಸಂತೋಷ ಮರೆದ, ಡಾ.ಅರುಣ ಡಾಂಗಿ, ಡಾ.ಪ್ರಕಾಶ ವಾಲಿ ಹಾಗೂ ಡಾ.ಎಂ.ಎನ್. ಪಾಟೀಲ ಅವರ ಮಾರ್ಗದರ್ಶನದಲ್ಲಿ ಅರವಳಿಕೆ ತಜ್ಞರ ತಂಡ, ಶುಶ್ರೂಷಾಧಿಕಾರಿಗಳ ತಂಡ ಯಶಸ್ವಿಯಾಗಿ ನೆರವೇರಿಸಿದೆ.