ಕ್ಯಾಂಡಲ್ ಮೆರವಣಿಗೆ ಮೂಲಕ ಮತದಾನ ಜಾಗೃತಿಕನ್ನಡಪ್ರಭ ವಾರ್ತೆ ಮೂಡಲಗಿ: ಪಟ್ಟಣದಲ್ಲಿ ಅರಬಾವಿ ಕ್ಷೇತ್ರದ ಸ್ವೀಪ್ ಸಮಿತಿ, ಶಿಕ್ಷಣ ಇಲಾಖೆ, ತಾಪಂ ಕಚೇರಿ, ಶಿಶು ಅಭಿವೃದ್ಧಿ ಇಲಾಖೆ, ಪುರಸಭೆ ಕಾರ್ಯಾಲಯ ಹಾಗೂ ವಿವಿಧ ಇಲಾಖೆಯ ಆಶ್ರಯದಲ್ಲಿ ಕ್ಯಾಂಡಲ್ ಮೆರವಣಿಗೆ ಮೂಲಕ ಮತದಾನ ಜಾಗೃತಿ ಮೂಡಿಸಿದರು. ಮೂಡಲಗಿ ಪಟ್ಟಣ ಪುರಸಭೆ ಆವರಣದಿಂದ ಶ್ರೀ ಕಲ್ಮೇಶ್ವರ ವೃತ್ತದವರಿಗೆ ಮತದಾನ ಜಾಗೃತಿಯ ಘೋಷಣೆಗಳೊಂದಿಗೆ ಜಾಥಾ ನಡೆಸಿದರು.