ನಿಲ್ಲಿಸಿದ್ದ ವಾಹನಕ್ಕೆ ಬೆಂಕಿ: ಐವರ ವಿರುದ್ಧ ದೂರುರಸ್ತೆ ಬದಿ ನಿಲ್ಲಿಸಲಾಗಿದ್ದ ಟಾಟಾಸುಮೋ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರ ವಿರುದ್ಧ ದೂರು ದಾಖಲಾಗಿದೆ. ಬೆಳಗಾವಿ ತಾಲೂಕಿನ ಕೇದನೂರು ಗ್ರಾಮದ ಮಾರುತಿ ಭಾಗಣ್ಣ ರಾಜಾಯಿ ಎಂಬುವರಿಗೆ ಸೇರಿದ್ದ ಟಾಟಾಸುಮೋ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ವಾಹನ ಸುಟ್ಟು ಕರಕಲಾಗಿ, ಸುಮಾರು ₹ 5 ಲಕ್ಷ ಮೌಲ್ಯದಷ್ಟು ನಷ್ಟವಾಗಿದೆ.