ಸ್ಮಾರ್ಟ್‌ಸಿಟಿ-ಪಾಲಿಕೆ ಮಧ್ಯೆ ದುರಸ್ತಿ ತಿಕ್ಕಾಟಕನ್ನಡಪ್ರಭ ವಾರ್ತೆ ಬೆಳಗಾವಿ ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಅಡಿಯಲ್ಲಿ ಕೈಗೆತ್ತಿಗೊಂಡಿದ್ದ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದು, ಈಗಾಗಲೇ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಆದರೆ, ಮಾಡಿದ ಕಾಮಗಾರಿಗಳ ಬಗ್ಗೆ ಸ್ಮಾರ್ಟ್‌ಸಿಟಿ ಮತ್ತು ಮಹಾನಗರ ಪಾಲಿಕೆಯ ತಿಕ್ಕಾಟ ಶುರುವಾಗಿದೆ. ಸಮಸ್ಯೆ ಉದ್ಭವಿಸಿರುವ ಕಾಮಗಾರಿಗಳ ದುರಸ್ತಿಯನ್ನು ಸ್ಮಾರ್ಟ್‌ಸಿಟಿಯವರೇ ಮಾಡಿಕೊಡುವಂತೆ ಪಾಲಿಕೆ ಹೇಳಿದರೆ, ಅದಕ್ಕು ನಮಗೂ ಸಂಬಂಧವಿಲ್ಲ. ಆದ್ದರಿಂದ ಪಾಲಿಕೆಯವರೇ ಕಾಮಗಾರಿಗಳನ್ನು ದುರಸ್ತಿ ಮಾಡಿಕೊಳ್ಳಬೇಕು ಎಂದು ಸ್ಮಾರ್ಟಸಿಟಿ ವ್ಯವಸ್ಥಾಪಕ ನಿರ್ದೇಶಕ ಸೋಮಲಿಂಗ ಗೆಣ್ಣೂರು ಸ್ಪಷ್ಟಪಡಿಸಿದರು.