ಜಾತಿ ಆಧಾರಿತ ರಾಜಕಾರಣಕ್ಕೆ ಮುಂದಾದ ಕಾಂಗ್ರೆಸ್ರಾಜ್ಯ ಸರ್ಕಾರ ಸುಮಾರು 500 ಮಠಗಳಿಗೆ ಬರಬೇಕಿದ್ದ ಅನುದಾನವನ್ನು ರಾಜ್ಯದ ಬೇರೆ ಬೇರೆ ಮಸೀದಿ, ಚರ್ಚ್‌ಗಳಿಗೆ ಹಂಚಿಕೆ ಮಾಡಿ ಹಿಂದುಗಳಿಗೆ ಅನ್ಯಾಯ ಮಾಡುತ್ತಿದೆ. ಇದರಿಂದ ಜಾತಿ ಆಧಾರಿತ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗುತ್ತಿದೆ ಎಂದು ನರಗುಂದ ಶಾಸಕ, ಮಾಜಿ ಸಚಿವ ಸಿ.ಸಿ.ಪಾಟೀಲ ಕಿಡಿಕಾರಿದರು.