ಬಿಸಿಲಿನ ದಾಹ ನೀಗಿಸಲು ನೆರವಾಗಲಿರುವ ಅರವಟ್ಟಿಗೆ ಕೇಂದ್ರಜಗತ್ತಿನಲ್ಲಿ ಅನ್ನದಾನ, ರಕ್ತದಾನ, ಅಂಗಾಂಗಗಳ ದಾನ ಸೇರಿದಂತೆ ಇನ್ನಿತರ ದಾನಗಳಂತೆ ಜೀವಜಲವೂ ಕೂಡ ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ಉಚಿತ ತಂಪು ನೀರಿನ ಅರವಟ್ಟಿಗೆ ಅಥಣಿ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರಿಗೆ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಬಿಸಿಲಿನ ದಾಹ ನೀಗಿಸಲು ನೆರವಾಗಲಿದೆ ಎಂದು ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಹೇಳಿದರು.